ನಮ್ಮ ಬಗ್ಗೆ

ನಮ್ಮ ಬಗ್ಗೆ

ರೈತರ ಜ್ಞಾನ, ಪ್ರಕೃತಿಯ ಶಕ್ತಿ ಮತ್ತು ಸಮುದಾಯದ ಒಗ್ಗಟ್ಟಿನಿಂದ ಬೆಳೆದ ಸಂಘಟನೆ
  • ಹಳದಿ ಬಣ್ಣದ ಸಣ್ಣ ಕುಳ್ಳಿ, ರೈತರ ಜೀವನದಲ್ಲಿ ದೊಡ್ಡ ಬೆಳಕು.
  • ನಾವು ಕಾಣಬೇಕೆಂದಿರುವ ಭವಿಷ್ಯ:
  • ಭಾರತದಲ್ಲಿಯೇ ಅತ್ಯಂತ ಪ್ರಗತಿಪರ ಮತ್ತು ಸುಸ್ಥಿರ ಈರುಳ್ಳಿ ಉತ್ಪಾದನಾ ಸಂಸ್ಥೆಯಾಗುವುದು.
  • ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ರೈತರ ಉತ್ಪನ್ನಗಳಿಗೆ ವಿಶಿಷ್ಟ ಸ್ಥಾನ ಸೃಷ್ಟಿಸುವುದು.
  • ರೈತರನ್ನು ಕೇವಲ ಬೆಳೆಗಾರರಲ್ಲ, ಉದ್ಯಮಿಗಳಾಗಿ ರೂಪಿಸುವ ಶಕ್ತಿಯನ್ನು ನೀಡುವುದು.
  • ಪ್ರತಿಯೊಬ್ಬ ರೈತನು ತಂತ್ರಜ್ಞಾನ, ಮಾಹಿತಿ ಮತ್ತು ಮಾರುಕಟ್ಟೆ ಸಂಪರ್ಕದಲ್ಲಿ ಸಮರ್ಪಕ ಸಾಮರ್ಥ್ಯ ಹೊಂದಿರುವ ಸಮಾಜ.
  • ರೈತರಿಗೆ ನ್ಯಾಯಸಮ್ಮತ ಬೆಲೆ, ಮಾರ್ಗದರ್ಶನ ಹಾಗೂ ತಾಂತ್ರಿಕ ಬೆಂಬಲ ಒದಗಿಸುವುದು.
  • ಸುಸ್ಥಿರ ಈರುಳ್ಳಿ ಕೃಷಿ ಪದ್ಧತಿಗಳನ್ನು ಉತ್ತೇಜಿಸಿ, ಮುಂದಿನ ತಲೆಮಾರಿಗೂ ಮಣ್ಣು–ನೀರು ಸಂಪನ್ಮೂಲಗಳನ್ನು ರಕ್ಷಿಸುವುದು.
  • ಗ್ರಾಮೀಣ ಯುವಕರಿಗೆ ತರಬೇತಿ ಮತ್ತು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ವೇಗ ನೀಡುವುದು.
  • ರೈತರ ಸಮಸ್ಯೆ, ಹಕ್ಕು, ಹಾಗೂ ಅಗತ್ಯಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಗಟ್ಟಿಯಾಗಿ ಪ್ರತಿನಿಧಿಸುವುದು.
  • ಸದಸ್ಯತ್ವದ ಮೂಲಕ ರೈತರು, ಉದ್ಯಮಿಗಳು ಮತ್ತು ಬೆಂಬಲಿಗರ ನಡುವೆ ಬಲವಾದ ಒಂದು ನೆಟ್‌ವರ್ಕ್ ನಿರ್ಮಿಸುವುದು.
  • ದಾನ ಮತ್ತು ಸಹಾಯ ಯೋಜನೆಗಳ ಮೂಲಕ ರೈತರಿಗೆ ತರಬೇತಿ, ಮಾರ್ಗದರ್ಶನ, ವಿಮೆ, ಹಾಗೂ ತುರ್ತು ಸಹಾಯ ಸಾಲುಗಳನ್ನು ಒದಗಿಸುವುದು.
  • ಈರುಳ್ಳಿ ಸಂಗ್ರಹಣೆ, ಸಂರಕ್ಷಣೆ, ಪ್ರಸಂಸ್ಕರಣೆ ಇವುಗಳಿಗಾಗಿ ಮೂಲಸೌಕರ್ಯ ನಿರ್ಮಿಸುವುದು.
  • ಭಾರತದ ವಿವಿಧ ರಾಜ್ಯಗಳಲ್ಲಿ Onion Origination Community Centers ಸ್ಥಾಪಿಸಿ ಜ್ಞಾನ–ಸಹಾಯ ಕೇಂದ್ರಗಳನ್ನಾಗಿ ಮಾಡುವುದು.
  • ರೈತರಿಗೆ ಡಿಜಿಟಲ್ ಕೃಷಿ ಸಾಧನಗಳು, ಮಾರುಕಟ್ಟೆ ಮಾಹಿತಿ ಮತ್ತು ಆನ್‌ಲೈನ್ ವಹಿವಾಟು ವೇದಿಕೆಗಳನ್ನು ಒದಗಿಸುವುದು.

ಎನ್ ಎಮ್ ಸಿದ್ದಪ್ಪ

ಅಧ್ಯಕ್ಷರು

ನನ್ನ ಬಗ್ಗೆ

ನಾವು ಈರುಳ್ಳಿ ರೈತರ ಸಬಲಿಕರಣ, ಹಕ್ಕುಗಳ ರಕ್ಷಣೆ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಸ್ಥಾಪಿಸಲಾದ ಒಗ್ಗಟ್ಟಿನ ರೈತ ಸಂಘಟನೆ. ಬೀಜದಿಂದ ಮಾರುಕಟ್ಟೆಯವರೆಗಿನ ಪ್ರತಿಯೊಂದು ಹಂತದಲ್ಲೂ ರೈತರಿಗೆ ಬೆಂಬಲ ನೀಡುವುದು ನಮ್ಮ ಮುಖ್ಯ ಉದ್ದೇಶ.

0 Y
+

ವರ್ಷಗಳ ಕೃಷಿ ಅನುಭವದೊಂದಿಗೆ

ನಾವು ರೈತರ ಉತ್ಪಾದಕತೆ, ಮಾರುಕಟ್ಟೆ ಪ್ರವೇಶ ಹಾಗೂ ಆದಾಯವನ್ನು ಹೆಚ್ಚಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ.

ನಾವು ಮಾಡುತ್ತಿರುವ ಕಾರ್ಯಗಳು

Scroll to Top